Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿದೇಶಿ ಸಾಹಸ ಕ್ರೀಡೆ ಸ್ಕೈಜಂಪ್ ಟ್ರ್ಯಾಂಪೊಲೈನ್ ಮೆರಗು: ಪ್ರಥಮ, ದ್ವಿತೀಯ ಸ್ಥಾನ ಮುಂಬೈ ಮಡಿಲಿಗೆ

ಸುದ್ದಿಮೂಲ ವಾರ್ತೆ

ಬೆಂಗಳೂರು, ಮೇ 22; ಸಾಹಸ ಕ್ರೀಡೆಯತ್ತ ಯುವ ಸಮೂಹ ಒಳಗೊಂಡಂತೆ ಎಲ್ಲಾ ವಯೋಮಾನದವರನ್ನು ಸೆಳೆಯಲು ಗರುಡಾ ಮಾಲ್ ನಲ್ಲಿ ಸ್ಕೈಜಂಪರ್‌ ಭಾಗವಾದ ರಾಷ್ಟ್ರೀಯ ಟ್ರ್ಯಾಂಪೊಲೈನ್ ಸ್ಪರ್ಧೆ ಏರ್ಪಡಿಸಲಾಗಿತ್ತು.



ಮೊದಲ ಹಾಗೂ ಎರಡನೇ ಬಹುಮಾನವನ್ನು ಮುಂಬೈನ ಆದರ್ಶ್‌ ಬಿಹೋರ್‌, ರಾಹಿ ಪಕ್ಲೆ, ತೃತೀಯ ಬಹುಮಾನ ಔರಂಗಬಾದ್‌ ನ ಆಯುಷ್‌ ಮುಲೆ ಪಡೆದುಕೊಂಡರು. ಜಿಮ್ನಾಸ್ಟಿಕ್‌ ಫೆಡರೇಷನ್‌ ಆಫ್‌ ಇಂಡಿಯಾದ ಖಜಾಂಚಿ ಕೌಶಿಕ್‌ ಬಿಡಿವಾಲ ಅವರು ಬಹುಮಾನ ವಿತರಿಸಿದರು.

ಸ್ಕೈ ಜಂಪರ್ ಟ್ರ್ಯಾಂಪೊಲೈನ್ ಕ್ರೀಡೆಯನ್ನು ಜನಪ್ರಿಯಗೊಳಿಸಲು ಮತ್ತು ಪ್ರೋತ್ಸಾಹಿಸಲು ಈ ಸ್ಪರ್ಧೆ ಆಯೋಜಿಸಲಾಗಿತ್ತು. ಕ್ರೀಡಾಪಟುಗಳಾದ ಆಜಯ್ ಸಂಜಯ್ ಮುಲ್ಯ, ಅಜಯ್ ವಿಜಯ್ ಪವುಕ್ಕರ್, ತ್ರಿಶೂಲ್ ಗೌಡ, ಆದರ್ಶ್ ಆನಿಲ್, ರಾಹಿ ನಿಖಿಲ್ ,ಸೇಜಲ್ ಸುಹಾಸ್ ಜಾಧವ್, ಉದಿತಿ ಚೌಹ್ಹಣ್, ಅಭಿಜಿತ್ ಸುರೇಂದ್ರ ನಿಂಬಾಲ್ಕರ್, ಶಾಹಿ ಯಾಸಿನ್, ಸೂರಜ್, ಆನಿಲ್ ರಾಜೇಂದ್ರನ್ ಅನ್ವಿತ್ ಸಚ್ಚಿನ್ ಸೈಜಂಪರ್ ಟ್ರ್ಯಾಂಪೊಲೈನ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಕೌಶಿಕ್‌ ಬಿಡಿವಾಲ ಮಾತನಾಡಿ, ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸ್ರೈಜಂಪ್ ಟ್ರ್ಯಾಂಪೊಲೈನ್ ಪಂದ್ಯ ಆಯೋಜಿಸಲಾಗಿತ್ತು. ಮಕ್ಕಳು,ಯುವ ಸಮುದಾಯ ಆರೋಗ್ಯ ಮತ್ತು ದೈಹಿಕ, ಮಾನಸಿಕವಾಗಿ ಸದೃಢವಾಗಿರಲು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಕೈಜಂಪ್ ಟ್ರ್ಯಾಂಪೊಲೈನ್ ವಿದೇಶಿ ಕ್ರೀಡೆಯಾಗಿದ್ದು ಇದು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿದೆ. ದೇಶ ಮತ್ತು ರಾಜ್ಯದ ಯುವ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡುವುದರಿಂದ ನಮ್ಮ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲಿ ಎನ್ನುವ ಕಾರಣಕ್ಕಾಗಿ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ