Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೊರಿಯಾ ಓಪನ್ ಇಂಟರ್ನ್ಯಾಷನಲ್ ಕರಾಟೆ ಚಾಂಪಿಯನ್‌ಶಿಪ್‌ :25 ಪದಕಗಳನ್ನು ಗೆದ್ದ ಕರ್ನಾಟಕದ ಆಟಗಾರರು

ಬೆಂಗಳೂರು,ಜು.5; ಕೊರಿಯಾದ ಬುಸಾನ್‌ನ ಗಿಜಾಂಗ್ ಜಿಮ್ನಾಷಿಯಂನಲ್ಲಿ ಕೊರಿಯಾ ಕರಾಟೆ ಡೋ ಫೆಡರೇಶನ್ ಮತ್ತು ಬುಸಾನ್ ಕರಾಟೆ ಡೋ ಫೆಡರೇಶನ್ ಸಹಯೋಗದಲ್ಲಿ ಜುಲೈ 1 ಮತ್ತು 2 ರಂದು ನಡೆದ ಕೊರಿಯಾ ಓಪನ್ ಇಂಟರ್ನ್ಯಾಷನಲ್ ಕರಾಟೆ ಚಾಂಪಿಯನ್‌ಶಿಪ್‌ ನಲ್ಲಿ ರಾಜ್ಯದ ೧೩ ಮಂದಿಯ ತಂಡ 7 ಚಿನ್ನ ಸೇರಿ 25 ಪದಕಗಳನ್ನು ಗೆದ್ದು ಮಹತ್ವದ ಸಾಧನೆ ಮಾಡಿದೆ. 6 ಬೆಳ್ಳಿ ಮತ್ತು 12 ಕಂಚಿನ ಪದಕಗಳನ್ನು ದೇಶಕ್ಕೆ ತಂದುಕೊಟ್ಟಿದ್ದಾರೆ.

ಪದಕ ಗೆದ್ದ ಕರಾಟೆಪಟುಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಕೆಎಫ್‌ನ 8ನೇ ಡಾನ್ ಬ್ಲಾಕ್ ಬೆಲ್ಟ್‌ನ ಮುಖ್ಯ ಕಾರ್ಯದರ್ಶಿ ಪಿ.ಆರ್. ರಮೇಶ್, ರಾಜ್ಯದ ಕರಾಟೆ ಕ್ರೀಡೆಗೆ ಇದು ಅತ್ಯಂತ ಮಹತ್ವದ ಮತ್ತು ಮುಕುಟಪ್ರಾಯವಾದ ಸಾಧನೆ. ಇದರಿಂದ ಕರಾಟೆಯನ್ನು ಜಾಗತಿಕಮಟ್ಟಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿದೆ. ಕರಾಟೆಯಲ್ಲಿ ಮತ್ತಷ್ಟು ಸಾಧನೆಗೆ ಇದು ಪ್ರೇರಣೆಯಾಗಲಿದೆ ಎಂದರು.

ಹಿರಿಯ ಮಹಿಳಾ ವಿಭಾಗದಲ್ಲಿ ಫ್ರಾಂಕ್‌ ಅಂಟೋನಿ ಪಬ್ಲಿಕ್‌ ಶಾಲೆಯ ದಿವ್ಯ ಅರ್ಜುನ್‌ ಗುಪ್ತಾ ಎರಡು ಚಿನ್ನ ಮತ್ತು ತಂಡ ವಿಭಾಗದಲ್ಲಿ ಒಂದು ಬೆಳ್ಳಿ, ಕಿರಿಯರ ವಿಭಾಗದಲ್ಲಿ ಇದೇ ಶಾಲೆಯ ರೊನ್ಶಿ ಅರ್ಜುನ್‌ ಗುಪ್ತಾ ಬೆಳ್ಳಿ, ಬೆಥನಿ ಪ್ರೌಢ ಶಾಲೆಯ ನಿವೇದಿತ ಕೋದಂಡರಾಮ್‌ ಎರಡು ಬೆಳ್ಳಿ ಮತ್ತು ಒಂದು ಕಂಚು, ಮಹಿಳಾ ವಿಭಾಗದಲ್ಲಿ ದೊಡ್ಡ ನೆಕ್ಕುಂದಿಯ ವಿಬ್ಗಯಾರ್‌ ಶಾಲೆಯ ಗರ್ಗಿ ಸಂಗ್ಲಿಕರ್‌ ಎರಡು ಬೆಳ್ಳಿ, ಜಯನಗರದ ಜೈನ್‌ ಕಾಲೇಜಿನ ಅರ್ಜುನ್‌ ಪ್ರವೀನ್‌ ಮೆನನ್‌ ಪುರುಷರ ವಿಭಾಗದಲ್ಲಿ ಎರಡು ಕಂಚು, ಸೆಂಟ್‌ ಜೋಸೆಫ್‌ ಶಾಲೆಯ ರಯನ್‌ ಮನ್ಸೂರ್‌ ಅತಿ ಕಿರಿಯ ವಿಭಾಗದಲ್ಲಿ ಎರಡು ಕಂಚು, ನ್ಯೂ ಹಾರಿಜನ್‌ ಪಬ್ಲಿಕ್‌ ಶಾಲೆಯ ನಿಶಿತ್‌ ಎ ಜೈನ್‌ ಅತಿ ಕಿರಿಯರ ವಿಭಾಗರದಲ್ಲಿ ಎರಡು ಕಂಚು, ಕ್ರೈಸ್ಟ್‌ ಕಾಲೇಜಿನ ಸಮೀಕ್ಷಾ ಪಿ.ಎನ್.‌ ಅವರು ಮಹಿಳೆಯರ ವಿಭಾಗದಲ್ಲಿ ತಲಾ ಒಂದೊಂದು ಬೆಳ್ಳಿ, ಕಂಚು, ವೈಟ್‌ ಫೀಲ್ಡ್‌ ಗ್ಲೋಬಲ್‌ ಶಾಲೆಯ ಅಮಿಝತೀನಿ ಗೋಪಣ್ಣ ಅವರು ಅತಿ ಕಿರಿಯ ವಿಭಾಗದಲ್ಲಿ ಕಂಚು, ಗೋಕುಲ್‌ ನ ನ್ಯೂ ಹಾರಿಜೋನ್‌ ಶಾಲೆಯ ಪ್ರಿಯಾನ್ಶಿ ಶರ್ಮಾ ಅವರು ಎರಡು ಬೆಳ್ಳಿ, ತಂಡ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.

ಹಿರಿಯ ವಿಭಾಗದಲ್ಲಿ ರನ್ಶಿ ರಮೇಶ್‌ ಗಣೇಶ್‌ ಒಂದು ಚಿನ್ನ, ಒಂದು ಬೆಳ್ಳಿ, ರನ್ಶಿ ಸುಬ್ರಮಣಿ ಚಂದ್ರಶೇಖರ್‌ ಒಂದು ಕಂಚು, ರನ್ಶಿ ಇ.ಎನ್.‌ ರಮ್ಯಾ ಒಂದು ಕಂಚು ಗೆದ್ದಿದ್ದಾರೆ. ಈ ಮಹತ್ವದ ಸಾಧೆನಯಿಂದ ಮತ್ತಷ್ಟು ಮಂದಿ ಕರಾಟೆಯತ್ತ ಒಲವು ತೋರಲು ಸಹಕಾರಿಯಾಗಲಿದ್ದು, ಭವಿಷ್ಯದಲ್ಲಿ ಈ ಕ್ರೀಡೆಗೆ ಹೊಸ ಆಯಾಮ ದೊರೆಯಲಿದೆ ಎಂದು ರಮೇಶ್‌ ಸಂತಸ ವ್ಯಕ್ತಪಡಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ