Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೆಣ್ಣೂರಿನಲ್ಲಿ ಅಡ್ವಾನ್ಸ್ಡ್ ಗ್ರೊಹೇರ್, ಗ್ಲೋಸ್ಕಿನ್ ಕ್ಲಿನಿಕ್ ಆರಂಭ

ಸುದ್ದಿಮೂಲ ವಾರ್ತೆ

ಬೆಂಗಳೂರು, ಅ.20: ಕೂದಲಿನ ಮರುಬೆಳವಣಿಗೆ ಹಾಗೂ ತ್ವಜೆಯ ಚಿಕಿತ್ಸೆಯ ಕ್ಷೇತ್ರದಲ್ಲಿನ ಮುಂಚೂಣಿ ಸಂಸ್ಥೆಯಾಗಿರುವ ಅಡ್ವಾನ್ಸ್ಡ್ ಗ್ರೋಹೈರ್ ಮತ್ತು ಗ್ಲೋಸ್ಕಿನ್ ಕ್ಲಿನಿಕ್ ಅನ್ನು ಹೆಣ್ಣೂರಿನಲ್ಲಿ ಆರಂಭಿಸಿದೆ. ವೈಯಕ್ತಿಕ ಸ್ವಾಸ್ಥ್ಯದ ಸೇವೆಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.

ಹೆಣ್ಣೂರಿನಲ್ಲಿ ಅಡ್ವಾನ್ಸ್ಡ್ ಗ್ರೋಹೈರ್ ಮತ್ತು ಗ್ಲೋಸ್ಕಿನ್ ಕ್ಲಿನಿಕ್ನಲ್ಲಿ ಕೂದಲಿನ ಮರು ಬೆಳವಣಿಗೆ ಮತ್ತು ಚರ್ಮದ ಚಿಕಿತ್ಸೆಯಲ್ಲಿ ಉತ್ಕೃಷ್ಟತೆಯನ್ನು ಬಯಸುವವರಿಗೆ ಉತ್ತಮ ಸೇವೆಗಳು ದೊರೆಯಲಿವೆ. ತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಕೂದಲಿನ ಮರು ಬೆಳವಣಿಗೆಗೆ ಈ ಕೇಂದ್ರ ಸಮರ್ಪಿತವಾಗಿದೆ.

ಅಡ್ವಾನ್ಸ್ಡ್ ಗ್ರೋಹೈರ್ ಮತ್ತು ಗ್ಲೋಸ್ಕಿನ್ ಕ್ಲಿನಿಕ್ ನಲ್ಲಿ ಕ್ಲಿನಿಕಲ್ ಮತ್ತು ಕ್ಲಿನಿಕಲ್ ಅಲ್ಲದ ವಿಧಾನಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಪರ್ಕ್ಯುಟೇನಿಯಸ್ ಎಯುಇ ಹೇರ್ ಟ್ರಾನ್ಸ್ಪ್ಲಾಂಟ್, ಪಿಆರ್ಪಿ ಪ್ರೊ +, ಲೇಸರ್ ಹೇರ್ ಥೆರಪಿ, ಕಾಸ್ಮೆಟಿಕ್ ಸಿಸ್ಟಮ್ ಸೇವೆಗಳು ಇಲ್ಲಿ ಲಭ್ಯವಿದೆ. ಇವೆಲ್ಲವೂ ಯುಎಸ್-ಎಫ್ಡಿಎನಿಂದ ಸಂಪೂರ್ಣ ಮಾನ್ಯತೆ ಪಡೆದುಕೊಂಡಿದೆ.

ಕೂದಲಿನ ಮರು ಬೆಳವಣಿಗೆಯ ಪರಿಹಾರಗಳ ಜೊತೆಗೆ, ಕ್ಲಿನಿಕ್ ಹೈಡ್ರಾಫೇಷಿಯಲ್, ಕ್ಯೂ ಸ್ವಿಚ್ಡ್ ಲೇಸರ್, ಕೆಮಿಕಲ್ ಪೀಲ್, ಬೊಟೊಕ್ಸ್, ಫಿಲ್ಲರ್ಗಳು, ಥ್ರೆಡ್ ಲಿಫ್ಟ್, ಫುಲ್ ಬಾಡಿ ಲೇಸರ್, ಫೇಸ್ ಪಿಆರ್ಪಿ, ಮೊಡವೆಗಳನ್ನು ತೆಗೆದುಹಾಕುವಿಕೆ ಸೇರಿದಂತೆ ಹಲವಾರು ಅಸಾಧಾರಣ ಚರ್ಮ ಚಿಕಿತ್ಸೆಗಳು ದೊರೆಯುತ್ತವೆ .

ಈ ಚಿಕಿತ್ಸಾಲಯವು ಅತ್ಯಾಧುನಿಕ ಉಪಕರಣಗಳನ್ನು ಹೊಂದಿದೆ ಮತ್ತು ಸೌಂದರ್ಯ ಔಷಧ ಕ್ಷೇತ್ರದಲ್ಲಿ ವಿಶ್ವದರ್ಜೆಯ ತಜ್ಞರು ಸೇವೆಯನ್ನು ನೀಡುತ್ತಾರೆ. ನಿಖರವಾಗಿ ಕಾರ್ಯನಿರ್ವಹಿಸುವ ಪೇಟೆಂಟ್ ಪಡೆದ ಉನ್ನತ-ಮಟ್ಟದ ಯಂತ್ರೋಪಕರಣಗಳನ್ನು ಬಳಸಲಾಗುತ್ತದೆ. ಇವೆಲ್ಲವೂ ಗ್ರಾಹಕರಿಗೆ ಗಮನಾರ್ಹ ಫಲಿತಾಂಶಗಳನ್ನು ನೀಡುತ್ತದೆ.

ಅಡ್ವಾನ್ಸ್ಡ್ ಗ್ರೋಹೈರ್ ಮತ್ತು ಗ್ಲೋಸ್ಕಿನ್ ಕ್ಲಿನಿಕ್ ನ ಬ್ರಾಂಡ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಶರಣ್ ವೇಲ್ ಜೆ ಶುಭಾರಂಭ ಸಮಾರಂಭದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಫ್ರ್ಯಾಂಚೈಸ್ ಮಾಲೀಕರು ಮತ್ತು ಕ್ಲಿನಿಕ್ನ ಸಮರ್ಪಿತ ಸಿಬ್ಬಂದಿ ಇದ್ದರು.

 
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ