Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೊನೇಹಳ್ಳಿ ಪ್ರೀಮಿಯರ್ ಲೀಗ್: ವಿಜೇತ ತಂಡಗಳಿಗೆ ಬಹುಮಾನ ವಿತರಣೆ

ಸುದ್ದಿಮೂಲ ವಾರ್ತೆ

ತಿಪಟೂರು, ಜೂ.15: ಕ್ರೀಡೆ ಪ್ರತಿಯೊಬ್ಬ ಯುವಕನಿಗೆ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯವಶ್ಯಕವೆಂದು ಪ್ರಥಮ ದರ್ಜೆ ಅರಣ್ಯ ಗುತ್ತಿಗೆದಾರ ಶಶಿಧರ್ ತಿಳಿಸಿದರು.

ತಾಲ್ಲೂಕಿನ ಕೊನೇಹಳ್ಳಿ ಶ್ರೀ ಶಂಕರೇಶ್ವರ ಕ್ರಿಕೆಟರ್ಸ್‌ ವತಿಯಿಂದ ಅಶ್ವಿನಿ ಹಿರಿಯ ಪ್ರಾಥಮಿಕ ಶಾಲೆ ಕೊನೆಹಳ್ಳಿ ಶಾಲಾ ಆವರಣದಲ್ಲಿ ನಡೆದ ಕೊನೆಹಳ್ಳಿ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಗೆದ್ದ ತಂಡಗಳಿಗೆ ಟ್ರೋಪಿಯನ್ನು ವಿತರಿಸಿ ಅವರು ಮಾತನಾಡಿದರು.

ಕ್ರೀಡೆಯಲ್ಲಿ ಯಾರು ಹೆಚ್ಚು ಸಮಯವನ್ನು ಯುವಕನಾಗಿದ್ದ ಸಂದರ್ಭದಲ್ಲಿ ಕಳೆಯುತ್ತಾರೆಯೋ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯ ಜೀವನಪೂರ್ತಿ ಉತ್ತಮವಾಗಿರುತ್ತದೆ. ಮೊಬೈಲ್‌ಯುಗದಲ್ಲಿ ದೈಹಿಕ ಚಟುವಟಿಕೆಗಳು ಇಲ್ಲದಿರುವ ಈ ಸಂದರ್ಭದಲ್ಲಿ ಕ್ರೀಡೆ ಚಟುವಟಿಕೆಯಿಂದ ಕೂಡಿರಲು ಸಹಕಾರಿ ಎಂದು ತಿಳಿಸಿದರು.

ದುರ್ಗಾಂಭ ಡೆವಲಪರ್ಸ್‌ ಮಾಲೀಕರಾದ ಬೋಜೇಗೌಡ ಮಾತನಾಡಿ, ಸೋಲು ಗೆಲುವು ಪಂದ್ಯಾವಳಿಗಳಲ್ಲಿ ಸರ್ವೇಸಾಮಾನ್ಯ ಇಂದಿನ ಸೋಲು ಮುಂದಿನ ಗೆಲುವೆಂದು ತಿಳಿದು ಸಮಾನವಾಗಿ ಸ್ವೀಕರಿಸಿ ಕ್ರೀಡಾ

ಮನೋಬಾವವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ಈ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನವನ್ನು ಜಂಟಿ ತಂಡಗಳಾದ ಲೆಜೆಂಡ್ ಕ್ರಿಕೆಟರ್ಸ್‌ ಮತ್ತು ರಾಯಲ್ ಸ್ಟೆಂಕರ್ಸ್‌ ತಂಡಗಳು ಪಡೆದುಕೊಂಡವು. ಸಮಾರೋಪ ಸಮಾರಂಭದಲ್ಲಿ ಗ್ರಾಪಂ ಸದಸ್ಯರಾದ ನಟರಾಜ್ ಕೆ. ಹರೀಶ್ ಗೌಡ, ನವೀನ್ ಹಾಗೂ ಮುಖಂಡರಾದ ಅರುಣ್ ಕುಮಾರ್, ಉಮೇಶ್ ಹಾಗೂ ವಿವಿಧ

ತಂಡಗಳು ಉಪಸ್ಥಿತರಿದ್ದರು.

 
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ