Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಮ್ಮೆೆಗೆ ರೇಬೀಸ್ ನಾಯಿ ಕಡಿತ ಹಾಲಿನ ರಾಯ್ತ ಸೇವಿಸಿದವರಿಗೆ ರೇಬೀಸ್

ಸುದ್ದಿಮೂಲ ವಾರ್ತೆ ಬುಡೌನ್ (ಉತ್ತರ ಪ್ರದೇಶ), ಡಿ.29:
ರೇಬಿಸ್ ಪೀಡಿತ ನಾಯಿ ಕಚ್ಚಿಿದ ಎಮ್ಮೆೆಯ ಹಾಲಿನಿಂದ ತಯಾರಿಸಿದ ಮೊಸರಿನ ರಾಯ್ತ ಸೇವಿಸಿದ ಪರಿಣಾಮ ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯ ಪಿಪ್ರೌೌಲಿ ಗ್ರಾಾಮದ 200 ಮಂದಿಗೆ ರೇಬಿಸ್ ರೋಗ ಹರಡಿರುವ ಆತಂಕ ಎದುರಾಗಿದೆ.
ಮುನ್ನೆೆಚ್ಚರಿಕೆ ಕ್ರಮವಾಗಿ ರೇಬೀಸ್ ಲಸಿಕೆಯನ್ನು ಎಲ್ಲರಿಗೂ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 23ರಂದು ಗ್ರಾಾಮದಲ್ಲಿ ವ್ಯಕ್ತಿಿಯೊಬ್ಬರ ಪುಣ್ಯತಿಥಿ ನಡೆದಿತ್ತು. ಅಲ್ಲಿ ಜನರು ರಾಯ್ತ ಸೇರಿದಂತೆ ಇತರ ಖಾದ್ಯಗಳನ್ನು ಸೇವಿಸಿದ್ದರು. ರಾಯ್ತ ತಯಾರಿಸಲು ಹಾಲು ಬಳಸಿದ ಎಮ್ಮೆೆಗೆ ಕೆಲವು ದಿನಗಳ ಹಿಂದೆ ನಾಯಿ ಕಚ್ಚಿಿತ್ತು ಎಂದು ತಿಳಿದು ಬಂದಿದೆ.
ಇದರಿಂದ ಆತಂಕಕ್ಕೆೆ ಒಳಗಾದ ಗ್ರಾಾಮಸ್ಥರು ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಕೂಡಲೇ ಆರೋಗ್ಯ ಅಧಿಕಾರಿಗಳು ರಾಯ್ತ ಸೇವಿಸಿದ ಎಲ್ಲರಿಗೂ ರೇಬೀಸ್ ಚುಚ್ಚುಮದ್ದು ನೀಡಿದ್ದಾರೆ.
ಎಮ್ಮೆೆ ಸಾವು: ನಾಯಿ ಕಚ್ಚಿಿದ ಎಮ್ಮೆೆ ರೇಬೀಸ್ ಲಕ್ಷಣಗಳಿಂದ ಮೃತಪಟ್ಟಿಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಮುನ್ನೆೆಚ್ಚರಿಕೆ ಕ್ರಮವಾಗಿ ರೇಬೀಸ್ ಚುಚ್ಚುಮದ್ದು ನೀಡಲಾಗಿದೆ ಎಂದು ಮುಖ್ಯ ಆರೋಗ್ಯ ಅಧಿಕಾರಿ ಡಾ.ರಾಮೇಶ್ವರ ಮಿಶ್ರಾಾ ತಿಳಿಸಿದ್ದಾರೆ.
ಬಾಕ್ಸ್
ಹಾಲು ಕುದಿಸಿದ ಬಳಿಕ ರೇಬೀಸ್ ವೈರಸ್ ಇರುವುದಿಲ್ಲ
ಹಾಲು ಕುದಿಸಿದ ನಂತರ ರೇಬೀಸ್ ವೈರಸ್‌ಗಳು ಇರುವುದಿಲ್ಲ. ಆದರೆ ಯಾವುದೇ ಸಂಭಾವ್ಯ ಅಪಾಯ ತಡೆಗಟ್ಟುವ ಸಲುವಾಗಿ ಎಲ್ಲರಿಗೂ ರೇಬೀಸ್ ಚುಚ್ಚುಮದ್ದು ನೀಡಲಾಗಿದೆ. ಅಲ್ಲದೆ ಗ್ರಾಾಮಸ್ಥರಿಗೆ ಯಾವುದೇ ವದಂತಿ ಹರಡದಂತೆ ಎಚ್ಚರಿಕೆ ನೀಡಲಾಗಿದೆ ಎಂದು ವೈದ್ಯ ಮಿಶ್ರಾಾ ತಿಳಿಸಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ