Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಸ್‌ಐಆರ್, ದೆಹಲಿ ಸ್ಫೋೋಟ ಚರ್ಚೆಗೆ ವಿಪಕ್ಷಗಳ ಪಟ್ಟು ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ

ಸುದ್ದಿಮೂಲ ವಾರ್ತೆ ನವದೆಹಲಿ, ನ.30:
ಸಂಸತ್ತಿಿನ ಚಳಿಗಾಲದ ಅಧಿವೇಶನ ಡಿ.1ರ ಸೋಮವಾರದಿಂದ ಆರಂಭವಾಗುತ್ತಿಿದ್ದು ಮತದಾರರ ಪಟ್ಟಿಿ ಸಮಗ್ರ ವಿಶೇಷ ಪರಿಷ್ಕರಣೆ ಹಾಗೂ ರಾಷ್ಟ್ರೀಯ ಭದ್ರತೆ ಕುರಿತು ಚರ್ಚೆಗೆ ಆದ್ಯತೆ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಾಯಿಸಿವೆ.
ಅಧಿವೇಶನ ಡಿ. 19 ರವರೆಗೆ ನಡೆಯಲಿದೆ. ಕಾಂಗ್ರೆೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಎಸ್‌ಐಆರ್, ದೆಹಲಿ ಸ್ಫೋೋಟ, ದೆಹಲಿಯಲ್ಲಿ ಹೆಚ್ಚುತ್ತಿಿರುವ ವಾಯು ಮಾಲಿನ್ಯ ಈ ವಿಷಯಗಳ ಬಗ್ಗೆೆ ಚರ್ಚೆಗೆ ಆಗ್ರಹಿಸಿ ಹೋರಾಟ ನಡೆಸಲು ಮುಂದಾಗಿವೆ. ಮೇಲಿನ ವಿಷಯಗಳ ಬಗ್ಗೆೆ ಚರ್ಚೆ ನಡೆಸಲು ಅವಕಾಶ ಕೊಡಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ.
ಚಳಿಗಾಲದ ಅಧಿವೇಶನಕ್ಕೂ ಮುನ್ನ ಸರ್ಕಾರ ನಡೆಸಿದ ಸರ್ವ ಪಕ್ಷ ಸಭೆಯಲ್ಲಿ ಪಾಲ್ಗೊೊಂಡಿದ್ದ ವಿಪಕ್ಷಗಳು ಮತದಾರರ ಪಟ್ಟಿಿ ಸಮಗ್ರ ವಿಶೇಷ ಪರಿಷ್ಕರಣೆ ಹಾಗೂ ರಾಷ್ಟ್ರೀಯ ಭದ್ರತೆ ಕುರಿತು ಚರ್ಚೆಗೆ ಅವಕಾಶ ಕಲ್ಪಿಿಸಬೇಕು ಎಂದು ಪಟ್ಟು ಹಿಡಿದವು.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನೇತೃತ್ವದಲ್ಲಿ ನಡೆದ ಸರ್ವ ಪಕ್ಷ ಸಭೆಯಲ್ಲಿ 36 ರಾಜಕೀಯ ಪಕ್ಷಗಳ 50 ನಾಯಕರು ಪಾಲ್ಗೊೊಂಡಿದ್ದರು.
ಸಂಸತ್ತಿಿನ ಸುಗಮ ಕಲಾಪಕ್ಕಾಾಗಿ ಎಲ್ಲ ವಿಪಕ್ಷಗಳನ್ನು ವಿಶ್ವಾಾಸಕ್ಕೆೆ ತೆಗೆದುಕೊಳ್ಳುವುದಾಗಿ ಸರ್ಕಾರ ತಿಳಿಸಿದೆ.
ಸಭೆಯಲ್ಲಿ ದೆಹಲಿ ಸ್ಫೋೋಟದ ಬಳಿಕ ಉಂಟಾಗಿರುವ ರಾಷ್ಟ್ರೀಯ ಭದ್ರತೆ ಕಳವಳ ಹಾಗೂ ಕಾರ್ಮಿಕ ಸಂಹಿತೆ ಕುರಿತಾದ ವಿಷಯಗಳನ್ನು ನಾಯಕರು ಪ್ರಸ್ತಾಾಪಿಸಿದರು ಎಂದು ತಿಳಿದು ಬಂದಿದೆ.
ರಾಜಕೀಯ ಪಕ್ಷಗಳಲ್ಲಿ ಭಿನ್ನಾಾಭಿಪ್ರಾಾಯ ಸಹಜ ಆದರೆ ಕಲಾಪಕ್ಕೆೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಇದರಿಂದ ಪ್ರಜಾಪ್ರಭುತ್ವ ಗಟ್ಟಿಿಗೊಳ್ಳುತ್ತದೆ. ಸಂಸತ್ತಿಿನ ಘನತೆ ಹೆಚ್ಚುತ್ತದೆ. ಸುಗಮ ಕಲಾಪಕ್ಕೆೆ ಅನುವು ಮಾಡಿಕೊಡುವಂತೆ ಸಚಿವ ಕಿರಣ್ ರಿಜಿಜು ಮನವಿ ಮಾಡಿದ್ದಾರೆ.
ಎಸ್ಐಆರ್ ಕುರಿತು ಚರ್ಚೆಗೆ ವಿರೋಧ ಪಕ್ಷಗಳ ಬೇಡಿಕೆ ಪರಿಗಣಿಸಲಾಗುತ್ತದೆಯೇ ಎಂಬ ಪ್ರಶ್ನೆೆಗೆ ಅವರು ಕಾರ್ಯಸೂಚಿಯನ್ವರು ಕಲಾಪ ಸಲಹಾ ಸಮಿತಿಗೆ ಸಭೆ ನಿರ್ಧರಿಸುತ್ತದೆ ಎಂದು ಹೇಳಿದರು.
ಸರ್ವಪಕ್ಷ ಭೆ ಕೇವಲ ಔಪಚಾರಿಕತೆಗೆ ಮಾತ್ರ ಸೀಮಿತವಾಗಿತ್ತು. ಪ್ರತಿಪಕ್ಷಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ ಎಂದು ಕಾಂಗ್ರೆೆಸ್ ನಾಯಕ ಜೈರಾಮ್ ರಮೇಶ್ ಆಕ್ಷೇಪಿಸಿದರು.
ಚಳಿಗಾಲದ ಅಧಿವೇಶನ ಆರಂಭವಾಗುವ ಮುನ್ನಾಾ ದಿನ ಕೇಂದ್ರ ಚುನಾವಣಾ ಆಯೋಗ ಎಸ್‌ಐಆರ್ ಪ್ರಕ್ರಿಿಯೆಯ ಗಡುವು ವಿಸ್ತರಿಸುವ ನಿರ್ಧಾರ ತೆಗೆದುಕೊಂಡಿದೆ.
ಬಾಕ್ಸ್
ಸಂಸತ್ತಿಿನಲ್ಲಿ ಮಂಡನೆಯಾಗುವ ಮಸೂದೆಗಳು
ಚಳಿಗಾಲದ ಅಧಿವೇಶನದಲ್ಲಿ ಕೇಂದ್ರವು ಸಂಸತ್ತಿಿನ ಎರಡೂ ಸದನಗಳ ವ್ಯವಹಾರಕ್ಕಾಾಗಿ ಒಟ್ಟು 14 ಮಸೂದೆಗಳನ್ನು ಪಟ್ಟಿಿ ಮಾಡಿದೆ. ಇದರಲ್ಲಿ ನಾಗರಿಕ ಪರಮಾಣು ವಲಯವನ್ನು ಖಾಸಗಿಯವರಿಗೆ ತೆರೆಯುವ ಶಾಸನವೂ ಸೇರಿದೆ. ಭಾರತದಲ್ಲಿ ಪರಮಾಣು ಶಕ್ತಿಿಯ ಬಳಕೆ ಮತ್ತು ನಿಯಂತ್ರಿಿಸಲು ಪ್ರಯತ್ನಿಿಸುವ ನಿರ್ಣಾಯಕ ’ಪರಮಾಣು ಶಕ್ತಿಿ ಮಸೂದೆ, 2025’, ಭಾರತೀಯ ಉನ್ನತ ಶಿಕ್ಷಣ ಆಯೋಗದ ಮಸೂದೆ ಮತ್ತು ಇತರೆ ಎಂಟು ಕರಡು ಶಾಸನಗಳು ಸಹ ಕಾರ್ಯಸೂಚಿಯಲ್ಲಿವೆ.
ಇತರೆ ಮಸೂದೆಗಳಲ್ಲಿ, ವಿಶ್ವವಿದ್ಯಾಾನಿಲಯಗಳು ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆೆಗಳು ಸ್ವತಂತ್ರ ಮತ್ತು ಸ್ವ-ಆಡಳಿತ ಸಂಸ್ಥೆೆಗಳಾಗಲು ಮತ್ತು ದೃಢವಾದ ಮತ್ತು ಪಾರದರ್ಶಕ ಮಾನ್ಯತೆ ಮತ್ತು ಸ್ವಾಾಯತ್ತತೆಯ ವ್ಯವಸ್ಥೆೆಯ ಮೂಲಕ ಶ್ರೇೇಷ್ಠತೆ ಉತ್ತೇಜಿಸಲು ಆಯೋಗವನ್ನು ಸ್ಥಾಾಪಿಸಲು ಪ್ರಯತ್ನಿಿಸುವ ಭಾರತೀಯ ಉನ್ನತ ಶಿಕ್ಷಣ ಆಯೋಗದ ಮಸೂದೆ ಸೇರಿದೆ.
ರಾಷ್ಟ್ರೀಯ ಹೆದ್ದಾರಿಗಳ (ತಿದ್ದುಪಡಿ) ಮಸೂದೆಯು ರಾಷ್ಟ್ರೀಯ ಹೆದ್ದಾರಿಗಳಿಗೆ ತ್ವರಿತ ಮತ್ತು ಪಾರದರ್ಶಕ ಭೂಸ್ವಾಾಧೀನ ಖಚಿತಪಡಿಸಿಕೊಳ್ಳಲು ಪ್ರಯತ್ನಿಿಸುತ್ತದೆ. ಮತ್ತೊೊಂದು ಶಾಸನವೆಂದರೆ ಕಾರ್ಪೊರೇಟ್ ಕಾನೂನುಗಳು (ತಿದ್ದುಪಡಿ) ಮಸೂದೆ, 2025, ಇದು ವ್ಯವಹಾರ ಸುಲಭಗೊಳಿಸಲು ಕಂಪನಿಗಳ ಕಾಯ್ದೆೆ, 2013 ಮತ್ತು ಎಲ್ಎಲ್ಪಿಿ ಕಾಯ್ದೆೆ, 2008 ಅನ್ನು ತಿದ್ದುಪಡಿ ಮಾಡುವ ನಿರ್ಧಾರ ಮಾಡಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ