Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಲಾಲೂ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಿಸಿದ ಚುನಾವಣೆ ಸೋಲು

ಪಟ್ನಾಾ (ಬಿಹಾರ), ನ.16:
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳದ ಸೋಲು (ಆರ್ಜೆಡಿ) ಲಾಲೂ ಪ್ರಸಾದ್ ಯಾದವ್ ಅವರ ಕುಟುಂಬದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಿಸಿದೆ.
ಸಹೋದರ ತೇಜಸ್ವಿಿ ಯಾದವ್ ಹಾಗೂ ಅವರ ಆಪ್ತರು ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ಲಾಲೂ ಪ್ರಸಾದ್ ಯಾದವ್ ಅವರ ಕಿರಿಯ ಪುತ್ರಿಿ ರೋಹಿಣಿ ಆಚಾರ್ಯ ಹೇಳಿದ್ದಾರೆ.
ತೇಜಸ್ವಿಿ ಮತ್ತು ಅವರ ಆಪ್ತರಾದ ರಾಜ್ಯಸಭಾ ಸದಸ್ಯ ಸಂಜಯ್ ಯಾದವ್ ಮತ್ತು ರಮೀಜ್ ಅವರು ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ. ಅಲ್ಲದೆ ಶನಿವಾರ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ವಿವಾಹಿತ ಮಹಿಳೆಯು ತನ್ನ ಪೋಷಕರನ್ನು ಉಳಿಸಲು ಏನನ್ನೂ ಮಾಡಬಾರದು. ಒಂದು ವೇಳೆ ಸಹೋದರರಿದ್ದರೆ ಅವರ ಅಥವಾ ಅವರ ಸ್ನೇಹಿತರ ಮೂತ್ರಪಿಂಡವನ್ನು ದಾನ ಮಾಡುವಂತೆ ಹೇಳಬೇಕು. ನನ್ನ ಪತಿ ಹಾಗೂ ಅತ್ತೆೆಯ ಅನುಮತಿ ಪಡೆಯದೇ ಅಲ್ಲದೆ ನನ್ನ ಮೂವರು ಮಕ್ಕಳ ಬಗ್ಗೆೆ ಯೋಚಿಸದೆ ನನ್ನ ಮೂತ್ರಪಿಂಡವನ್ನು ನನ್ನ ತಂದೆ ಲಾಲೂ ಪ್ರಸಾದ್ ಯಾದವ್ ಅವರಿಗೆ ದಾನ ಮಾಡುವ ಮೂಲಕ ನಾನು ಪಾಪ ಮಾಡಿದ್ದೇನೆ. ಯಾವ ಮಗಳಿಗೂ ಇಂತಹ ಗತಿ ಬಾರದಿರಲಿ ಎಂದು ರೋಹಿಣಿ ಮನನೊಂದು ಹೇಳಿದ್ದಾರೆ.
ಲಾಲೂ ಪ್ರಸಾದ್ ಮೂತ್ರಪಿಂಡ ದ ಸಮಸ್ಯೆೆಯಿಂದ ಬಳಲುತ್ತಿಿದ್ದಾಗ ರೋಹಿಣಿ ಅವರು ಮೂತ್ರಪಿಂಡ ದಾನ ಮಾಡಿದ್ದರು.
ವಿವಾಹಿತ ಮಹಿಳೆ ಮತ್ತು ಒಬ್ಬಳು ತಾಯಿ ಎನ್ನುವುದನ್ನೂ ಪರಿಗಣಿಸದೇ ದೌರ್ಜನ್ಯ ಎಸಗಲಾಯಿತು. ಮತ್ತು ನನ್ನ ಮೇಲೆ ಎಸೆಯಲು ಚಪ್ಪಲಿಯನ್ನು ಕೈಗೆತ್ತಿಿಕೊಂಡಿದ್ದರು ಆದ್ದರಿಂದ ನಾನು ನನ್ನ ತಾಯಿ ಮತ್ತು ಸಹೋದರಿಯನ್ನು ತೊರೆದು ಮನೆಯಿಂದ ಹೊರ ಬರಬೇಕಾಯಿತು ಎಂದು ಆರೋಪಿಸಿದರು.
ಈಗ ನಾನು ಅನಾಥಳಾಗಿದ್ದೇನೆ. ಯಾವ ಮನೆಯಲ್ಲೂ ರೋಹಿಣಿಯಂತಹ ಹಣೆಬರಹ ಹೊಂದಿರುವ ಮಗಳು ಅಥವಾ ಸಹೋದರಿ ಜನಿಸದಿರಲಿ ಎಂದು ಬಯಸುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಹಾರ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ಯಾರಾದರೂ ಹೊಣೆ ಹೊತ್ತುಕೊಳ್ಳಬೇಕು ಎಂದು ರೋಹಿಣಿ ಸೂಚಿಸಿರುವುದೇ ಕುಟುಂಬದೊಳಗಿನ ಕದನಕ್ಕೆೆ ಕಾರಣ ಎಂದು ರೋಹಿಣಿ ಸುಳಿವು ನೀಡಿದ್ದರು.
ತೇಜಸ್ವಿಿಯಾದವ್ ಅವರ ಆಪ್ತರಾದ ಸಂಜಯ್ ಮತ್ತು ರಮೀಜ್ ವಿರುದ್ಧ ರೋಹಿಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಾಣಕ್ಯನಂತೆ ಕಾರ್ಯತಂತ್ರ ರೂಪಿಸುತ್ತೇವೆ ಎಂದವರು ತಳಮಟ್ಟದ ಕಾರ್ಯಕರ್ತರ ಅಭಿಪ್ರಾಾಯವನ್ನು ಪರಿಗಣಿಸಲಿಲ್ಲ ಎಂದು ಆರೋಪಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ