Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ತಿರುಮಲ ಲಾಡು ಪ್ರಸಾದ ಕಲಬೆರಕೆಯಾಗಿದ್ದು ನಿಜ: ಟಿಟಿಡಿ ಮಾಜಿ ಅಧ್ಯಕ್ಷ ಸುಬ್ಬಾರೆಡ್ಡಿ

ಅಮರಾವತಿ, ೆ.08:
ತಿರುಮಲದ ಲಡ್ಡು ಪ್ರಸಾದದಲ್ಲಿ ಹಲವು ಕಲಬೆರಕೆ ರಾಸಾಯನಿಕಗಳನ್ನು ಬಳಸಲಾಗಿತ್ತು ಎಂಬ ಸತ್ಯವನ್ನು ತಿರುಮಲ ತಿರುಪತಿ ದೇವಸ್ಥಾಾನಂ (ಟಿಟಿಡಿ) ಮಂಡಳಿಯ ಮಾಜಿ ಅಧ್ಯಕ್ಷ ವೈ.ವಿ.ಸುಬ್ಬಾಾ ರೆಡ್ಡಿಿ ಒಪ್ಪಿಿಕೊಂಡಿದ್ದಾರೆ.
ಆಂಧ್ರದ ಮಾಜಿ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿಿ ಅವರ ಆಪ್ತ ಸಂಬಂಧಿಯೂ ಆಗಿರುವ ಸುಬ್ಬಾಾ ರೆಡ್ಡಿಿ, ಲಡ್ಡು ಮಾದರಿಗಳಲ್ಲಿ ರಾಸಾಯನಿಕಗಳು ಮತ್ತು ಇತರ ಪದಾರ್ಥಗಳಿವೆ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿದ ವರದಿಯನ್ನು ತಾವು ಒಪ್ಪುುವುದಾಗಿ ಸಾರ್ವಜನಿಕವಾಗಿಯೇ ಹೇಳಿದ್ದಾರೆ. ಆದರೆ ಈ ಕೃತ್ಯದಲ್ಲಿ ತಮ್ಮ ಪಾಲ್ಗೊೊಳ್ಳುವಿಕೆಯನ್ನು ಅವರು ನಿರಾಕರಿಸಿದ್ದು, ಅಂತರ ಕಾಯ್ದುಕೊಂಡಿದ್ದಾರೆ.
ತುಪ್ಪದಲ್ಲಿ ಕಲಬೆರಕೆ ಆಗಿತ್ತು. ಎಸ್‌ಐಟಿ ವರದಿ ತುಪ್ಪವನ್ನು ತಾಳೆ ಎಣ್ಣೆೆ, ತಾಳೆ ಕರ್ನಲ್ ಎಣ್ಣೆೆ ಮತ್ತು ಇತರ ಕೆಲವು ವಸ್ತುಗಳೊಂದಿಗೆ ಕಲಬೆರಕೆ ಮಾಡಲಾಗಿದೆ ಎಂದು ಹೇಳಿದೆ. ಅನೇಕ ಜನರು, ಕೆಲವು ಅಧಿಕಾರಿಗಳು ಮತ್ತು ಮೂರನೇ ವ್ಯಕ್ತಿಿಗಳು (ಹೊರಗಿನವರು) ಕಲಬೆರಕೆ ತುಪ್ಪದ ಪೂರೈಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಅವರ ಹೆಸರುಗಳನ್ನು ಆರೋಪಪಟ್ಟಿಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ದೆಹಲಿ ಮೂಲದ ಸುದ್ದಿ ವಾಹಿನಿಯೊಂದಕ್ಕೆೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಟಿಟಿಡಿ ಮಾಜಿ ಅಧ್ಯಕ್ಷರು ತಮ್ಮ ಪಾಲ್ಗೊೊಳ್ಳುವಿಕೆಯನ್ನು ಅಲ್ಲಗಳೆದರೂ ಅವರ ಅಧಿಕಾರಾವಧಿಯಲ್ಲಿ ನಡೆದ ತಪ್ಪನ್ನು ಒಪ್ಪಿಿಕೊಂಡಿದ್ದಾರೆ. ಹಾಗಾಗಿ, ವೈಎಸ್‌ಆರ್ ಕಾಂಗ್ರೆೆಸ್ ಸರ್ಕಾರದ ಅಡಿಯಲ್ಲಿ ಹಿಂದಿನ ಮಂಡಳಿ ಈ ಅಜಾಗರೂಕತೆಗೆ ಹೇಗೆ ಅವಕಾಶ ನೀಡಿತು ಎಂಬುದು ಕುರಿತು ಇದೀಗ ಹೊಸ ಚರ್ಚೆ ಹುಟ್ಟುಹಾಕಿದೆ.
ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪದ ಬಗ್ಗೆೆ ಸಿಬಿಐ ಬಹಿರಂಗಪಡಿಸಿದ ನಂತರ, ಹಲವಾರು ಶ್ರೀಗಳು ತೀವ್ರವಾಗಿ ಖಂಡಿಸಿದ್ದಾರೆ.
ಪವಿತ್ರ ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಸುವುದು ಹೇಯ ಕೃತ್ಯ. ಇಂತಹ ತಪ್ಪುುಗಳು ಮುಂದುವರಿದರೆ ಅದು ಜಗತ್ತಿಿನ ಕಲ್ಯಾಾಣಕ್ಕೆೆ ಹಾನಿ ಮಾಡುತ್ತದೆ ಎಂದು ತಮಿಳುನಾಡಿನ ಪೆರಂಬದೂರಿನ ಎಂಬಾರ್ ಜೀರ್ಯ ಸ್ವಾಾಮಿ ಆಕ್ರೋೋಶ ವ್ಯಕ್ತಪಡಿಸಿದ್ದಾರೆ. ಪ್ರಾಾಣಿಗಳ ಕೊಬ್ಬು ಮತ್ತು ರಾಸಾಯನಿಕಗಳಿಂದ ತಯಾರಿಸಿದ ಮಿಶ್ರಣವನ್ನು ಬಳಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಇದೇ ವೇಳೆ ಸರ್ಕಾರವನ್ನು ಒತ್ತಾಾಯಿಸಿದ್ದಾರೆ.
ತಮಿಳುನಾಡಿನ ಮನ್ನಾಾರ್‌ಗುಡಿ ಮಠದ ಮುಖ್ಯಸ್ಥ ಸಂಪತ್‌ಕುಮಾರ್ ರಾಮಾನುಜ ಜೀಯರ್ ಸ್ವಾಾಮೀಜಿ ಕೂಡ ಇಂಥದ್ದೇ ಅಭಿಪ್ರಾಾಯ ವ್ಯಕ್ತಪಡಿಸಿದ್ದಾರೆ. ಭಕ್ತಿಿಯಿಲ್ಲದ ಜನರ ಈ ಕೃತ್ಯದಿಂದಾಗಿ, ಪ್ರಸಾದವನ್ನು ಸೇವಿಸುವ ಲಕ್ಷಾಂತರ ಭಕ್ತರ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರಬಹುದು ಮತ್ತು ಅವರ ಭಾವನೆಗಳಿಗೆ ಎಷ್ಟು ಆಳವಾಗಿ ನೋವುಂಟಾಗುತ್ತದೆ ಎಂಬುದನ್ನು ಪರಿಗಣಿಸಬೇಕು. ಇಂತಹ ಕಲಬೆರಕೆಯಲ್ಲಿ ಭಾಗಿಯಾಗಿರುವವರನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ