Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳವು ಜಾಗೃತಿ ಅಭಿಯಾನಕ್ಕೆೆ ಚಾಲನೆ ಮತಗಳವು ಭಾರತದ ಬಡವರ ಮೇಲಿನ ವ್ಯವಸ್ಥಿಿತ ದಾಳಿ: ಸುರ್ಜೆವಾಲಾ

ಸುದ್ದಿಮೂಲ ವಾರ್ತೆ ಬೆಂಗಳೂರು, ಅ.03:
ಮುಕ್ತ ಹಾಗೂ ನ್ಯಾಾಯಸಮ್ಮತ ಚುನಾವಣೆ ನಡೆಸಲು ಹಾಗೂ ಮತದಾದನವನ್ನು ಖಾತ್ರಿಿಗೊಳಿಸಲು ಸಂವಿಧಾನ ಸೃಷ್ಟಿಿಸಿದ ಚುನಾವಣಾ ಆಯೋಗವೇ ಒಂದು ಪಕ್ಷದ ಪರ ಮತಗಳವು ಮಾಡುತ್ತಿಿದೆ. ಇದನ್ನು ಮೆಟ್ಟಿಿನಿಂತು ನಮ್ಮ ಪವಿತ್ರ ಸಂವಿಧಾನ ಎಲ್ಲರೂ ಒಟ್ಟಾಾಗಿ ರಕ್ಷಿಸಿಕೊಳ್ಳಬೇಕಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ್ ಹೇಳಿದರು.
ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಬಿಜೆಪಿ ಸರ್ಕಾರದ ಮತಕಳ್ಳತನ ವಿರುದ್ದ ಸಹಿ ಸಂಗ್ರಹ, ಜನಜಾಗೃತಿ ಅಭಿಯಾನ ಉದ್ಘಾಾಟಿಸಿ ಮಾತನಾಡಿದರು.
ದೇಶದಲ್ಲಿ ಹೊಸಕ್ರಾಾಂತಿಯ ಅಲೆಯನ್ನು, ಬದಲಾವಣೆಯನ್ನು ನಾವು ನೀವೆಲ್ಲರೂ ಸೇರಿ ಮಾಡಬೇಕಿದೆ. ಕಾಂಗ್ರೆೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿ ಗಲ್ಲಿ, ಗಲ್ಲಿಯಲ್ಲಿ ಎಷ್ಟು ಜನ ಸಾಧ್ಯವೋ ಅಷ್ಟು ಜನರನ್ನು ಒಗ್ಗೂಡಿಸಿ ಮತಕಳ್ಳತನದ ವಿರುದ್ಧ ಜನಾಭಿಪ್ರಾಾಯ ರೂಪಿಸಬೇಕು. ಜನರ ಹಕ್ಕನ್ನು ಕಾಪಾಡುವಂತೆ ಪ್ರೇೇರೇಪಿಸಬೇಕು. ಬೆಂಗಳೂರಿನ ಪುಲಕೇಶಿ ನಗರದಲ್ಲಿ ಎದ್ದಿರುವ ದನಿ ಇಡೀ ದೇಶಕ್ಕೆೆ ಕೇಳಿಸಬೇಕು ಎಂದರು.
ಅಶ್ಪಾಾಕ್ ಉಲ್ಲಾ ಖಾನ್, ಭಗತ್ ಸಿಂಗ್, ಸುಖದೇವ, ರಾಜಗುರು, ಸುಭಾಷ್ ಚಂದ್ರ ಬೋಸ್, ಬಾಲ ಗಂಗಾಧರ ತಿಲಕರು ಹೀಗೆ ನೂರಾರು ಮಂದಿ ಈ ದೇಶದಲ್ಲಿ ಕ್ರಾಾಂತಿಯ ಕಿಡಿ ಹೊತ್ತಿಿಸಿದ್ದಾರೆ. ಆದ ಕಾರಣಕ್ಕೆೆ ನಾವು ಸ್ವಾಾತಂತ್ರ್ಯವನ್ನು ಅನುಭವಿಸುತ್ತಿಿದ್ದೇವೆ. ಇದನ್ನು ಮತಕಳ್ಳತನದ ಮೂಲಕ ವ್ಯವಸ್ಥಿಿತವಾಗಿ ಕದಿಯಲಾಗುತ್ತಿಿದೆ. ಸಂವಿಧಾನದ ಜೊತೆ ಜೊತೆಗೆ ಪ್ರಜಾಪ್ರಭುತ್ವವನ್ನು ನಾಶ ಮಾಡಲಾಗುತ್ತಿಿದೆ. ಇದು ಕೇವಲ ಕಾಂಗ್ರೆೆಸ್ ಮತ್ತು ಬಿಜೆಪಿ ನಡುವಿನ ಸಂಘರ್ಷವಲ್ಲ. ಈ ದೇಶದ ಜನ ಸಾಮಾನ್ಯರ ಸಂಘರ್ಷ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿಿರುವ ಮತ ಕಳ್ಳತನ ವಿರೋಧಿ ಹೋರಾಟ ಕೇವಲ ರಾಜಕೀಯ ಉದ್ದೇಶದ ಹೋರಾಟವಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯ ಹೋರಾಟ. ಜನರ ಮತಾಧಿಕಾರದ ರಕ್ಷಣೆಯ ಹೋರಾಟ. ಈ ದೇಶದ ಜನರು ತಮ್ಮ ಆಯ್ಕೆೆಯ ಜನಪ್ರತಿನಿಧಿಗಳನ್ನು ಆಯ್ಕೆೆ ಮಾಡುವ ಸ್ವಾಾತಂತ್ರ್ಯವನ್ನೇ ಕಳೆದುಕೊಂಡಿದ್ದಾರೆ. ಪ್ರತಿಯೊಬ್ಬರ ಮತಗಳನ್ನೂ ವ್ಯವಸ್ಥಿಿತವಾಗಿ ಕದಿಯಲಾಗುತ್ತಿಿದೆ. ಒಬ್ಬ ವ್ಯಕ್ತಿಿಯ ಮತ ಎರಡಾಗಿ ಬದಲಾಗುತ್ತಿಿದೆ. ಒಂದೊಂದು ಮನೆಯಲ್ಲಿ ಐವತ್ತಕ್ಕೂ ಹೆಚ್ಚು ಜನ ಮತದಾರರು ವಾಸವಿದ್ದಾರೆ. ಇಷ್ಟೊೊಂದು ಅಕ್ರಮದ ಹಿಂದೆ ಇರುವವರು ಬಿಜೆಪಿ ಪಕ್ಷದ ಜೊತೆ ನಿಂತಿದ್ದಾರೆ. ಈ ಅಕ್ರಮವನ್ನು ನಾವು ಪ್ರಶ್ನೆೆ ಮಾಡಬೇಕು. ಬಯಲಿಗೆ ಎಳೆಯಬೇಕು. ಅದಕ್ಕಾಾಗಿ ಬೃಹತ್ ಹೋರಾಟದ ಜೊತೆ ಜೊತೆಯಲ್ಲಿ ಸಣ್ಣ ಸಣ್ಣ ಪ್ರಮಾಣದ ಜನಜಾಗೃತಿ ಹೋರಾಟಕ್ಕೆೆ ಕಾಂಗ್ರೆೆಸ್ ಸಜ್ಜಾಾಗಿದೆ ಎಂದರು.
ಬಡವರ ಮೇಲಿನ ದಾಳಿ: ಮತ ಕಳ್ಳತನದಿಂದ ಈ ದೇಶದ ಮಹಿಳೆಯರು, ಕೂಲಿ ಕಾರ್ಮಿಕರು, ಬಡವರು, ಹಿಂದುಳಿದವರು, ಅಲ್ಪ ಸಂಖ್ಯಾಾತರಿಗೆ, ಪರಿಶಿಷ್ಟ ಜಾತಿ, ಪಂಗಡದವರಿಗೆ, ಸಣ್ಣ ಉದ್ದಿಮೆದಾರರು, ದಿನಸಿ ಅಂಗಡಿ ಮಾಲೀಕರು, ಸಣ್ಣಪುಟ್ಟ ಬೀದಿಬದಿ ವ್ಯಾಾಪಾರಿಗಳು ಹೀಗೆ ಸಮಾಜದ ಸೂಕ್ಷ್ಮ ವರ್ಗದವರ ಮೇಲಿನ ದಾಳಿ ಹಾಗೂ ಈ ಎಲ್ಲಾ ಸಮಾಜಗಳಿಗೆ ತೀವ್ರ ಹಿನ್ನಡೆ ಎನ್ನಬಹುದು. ಇದು ಕೇವಲ ಮತಕಳ್ಳತನ ಮಾತ್ರವಲ್ಲ. ಜನಸಾಮಾನ್ಯರ ಹಕ್ಕಿಿನ ಕಳ್ಳತನ ಎಂದು ಸುರ್ಜೇವಾಲ ಹೇಳಿದರು.
ಮಾಧ್ಯಮಗಳನ್ನು, ಸರ್ಕಾರಿ ನೌಕರರನ್ನು, ಜನ ಪ್ರತಿನಿಧಿಗಳನ್ನು, ಪ್ರತಿಯೊಬ್ಬರನ್ನು ರಕ್ಷಿಸುತ್ತಿಿರುವುದು ಈ ದೇಶದ ಸಂವಿಧಾನ. ನೆಹರು, ವಲ್ಲಭಭಾಯಿ ಪಟೇಲ್, ಬಾಬು ರಾಜೇಂದ್ರ ಪ್ರಸಾದ್, ಮೌಲಾನಾ ಅಬ್ದುಲ್ ಕಲಾಂ ಸೇರಿದಂತೆ ಮಹಾನ್ ವ್ಯಕ್ತಿಿಗಳ ತ್ಯಾಾಗ, ಬಲಿದಾನದಿಂದ ಈ ದೇಶ ನಿರ್ಮಾಣವಾಗಿದೆ. ಇಂತಹ ಪವಿತ್ರ ದೇಶವನ್ನ ಲೂಟಿಕೋರರಿಂದ ರಕ್ಷಿಸಲು ಪಣ ತೊಡಬೇಕು. ಪಕ್ಷದ ಎಲ್ಲಾ ಘಟಕಗಳು ಕ್ರಿಿಯಾಶೀಲವಾಗಿದ್ದು ಮತಕಳ್ಳತನದ ವಿರುದ್ದ ಜನಾಭಿಪ್ರಾಾಯ ರೂಪಿಸಬೇಕು. ಕಾಂಗ್ರೆೆಸ್ ಪಕ್ಷದ ದನಿಯಾಗದೇ ದೇಶದ ಜನಸಾಮಾನ್ಯರ ದನಿಯಾಗಿ ಇದು ರೂಪುಗೊಳ್ಳಬೇಕು ಎಂದು ಹೇಳಿದರು.
ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ, ಕೆಪಿಸಿಸಿ ಕಾರ್ಯಧ್ಯಕ್ಷ ಜಿ.ಸಿ ಚಂದ್ರಶೇಖರ್, ಇಂಧನ ಸಚಿವ ಕೆ ಜೆ ಜಾರ್ಜ್, ಪುಲಕೇಶಿನಗರ ಶಾಸಕ ಎ. ಸಿ. ಶ್ರೀನಿವಾಸ್, ಕೆಪಿವೈಸಿಸಿ ಅಧ್ಯಕ್ಷ ಮಂಜುನಾಥ ಹೆಚ್.ಎಸ್ ಸಹಿ ಹಾಕುವ ಮೂಲಕ, ಜನಜಾಗೃತಿ ಮೂಡಿಸಲು ಸಾರ್ವಜನಿಕರಿಂದ ಸಹಿ ಸಂಗ್ರಹಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ