ಬೀದರ್ : ಬೀದರ್ ಉತ್ತರ ಕ್ಷೇತ್ರಕ್ಕೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಘೋಷಣೆ ಮಾಡಲಾಗಿದೆ.ಪಕ್ಷದ ಮುಖಂಡ ಗುಲಾಂ ಅಲಿ ಹೆಸರು ಅಖೈರುಗೊಳಿಸಲಾಗಿದೆ. ಗುಲಾಂ ಅಲಿ ಅವರ ಪತ್ನಿ ನಗರದ 33ನೇ ವಾರ್ಡ್ ದಿಂದ ಕಳೆದ ನಗರಸಭೆ ಚುನಾವಣೆಯಲ್ಲಿ ಆಪ್ ಪಕ್ಷದಿಂದ ಗೆಲುವು ಸಾಧಿಸಿದರು.
ಪಕ್ಷದ ಸಕ್ರಿಯ ಕಾರ್ಯಕರ್ತರಾಗಿರುವ ಗುಲಾಂ ಅಲಿ, ಇತ್ತೀಚೆಗೆ ಜೆಡಿಎಸ್ ತೊರೆದು ಆಪ್ ಸೇರ್ಪಡೆಗೊಂಡಿದ್ದ ಅಶೋಕ್ ಕುಮಾರ್ ಕರಂಜಿ ಸೇರಿ ಹಲವರು ಟಿಕೆಟ್ ಗೆ ಪೈಪೋಟಿ ನಡೆಸಿದ್ದರು.ಇದೀಗ ಟಿಕೆಟ್ ಘೋಷಿಸಿದ್ದು, ಪಕ್ಷದ ವರಿಷ್ಠರು ತಮ್ಮ ಮೇಲೆ ವಿಶ್ವಾಸ ಇಟ್ಟು ಟಿಕೆಟ್ ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಗೆಲುವಿಗೆ ಶ್ರಮಿಸಲಾಗುವುದು ಎಂದು ಗುಲಾಂ ಅಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈಗಾಗಲೇ ಆಪ್ ಪಕ್ಷವು ಜಿಲ್ಲೆಯ 6 ವಿಧಾನ ಸಭೆ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ್ದು, ಬೀದರ್ ಉತ್ತರ ಮಾತ್ರ ಬಾಕಿ ಇತ್ತು. ಇದೀಗ ಆರೂ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ್ದು, ಅಭ್ಯರ್ಥಿಗಳು ಪ್ರಚಾರ ಆರಂಭಿಸಿದ್ದಾರೆ.