ಸುದ್ದಿಮುಲ ವಾರ್ತೆ
ಚಿತ್ರದುರ್ಗ, ಮೇ 15: ಕರ್ನಾಟಕ ವಿಧಾನಸಭಾ ಚುನಾವಣೆ ಕುರಿತಂತೆ ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿ ಕಾರ್ಡ್ ಹಿನ್ನೆಲೆ ಚಿತ್ರದುರ್ಗ ತಾಲ್ಲೂಕಿನ ಗ್ರಾಮಸ್ಥರು ಕರೆಂಟ್ ಬಿಲ್ ಕಟ್ಟಲ್ಲ ಎಂದು ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳುವವನ ಮುಂದೆ ಪಟ್ಟು ಹಿಡಿದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
200 ಯುನಿಟ್ ಉಚಿತ ಕರೆಂಟ್ ಎಂದು ಘೋಷಿಸಿದ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಇಂದು ಅಧಿಕಾರಕ್ಕೆ ಬಂದಿದೆ. ಈ ತಿಂಗಳಿನಿಂದ ಗ್ರಾಮದ ಜನರು ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಕುತ್ತಿದ್ದಾರೆ.
ಸರ್ಕಾರದಿಂದ ಆದೇಶ ಬರುವ ವರೆಗೂ ಕರೆಂಟ್ ಬಿಲ್ ಕಟ್ಟಬೇಕು ಎಂದು ಬೆಸ್ಕಾಂ ಸಿಬ್ಬಂದಿ ಹೇಳಿ ಮನವರಿಕೆ ಂಮಾಡಿದರೆ, ಅದಕ್ಕೆ ಕ್ಯಾರೆ ಎನ್ನದ ಜನ ಈ ತಿಂಗಳಿನಿಂದಲೇ ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.