ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.11:ಬಿಜೆಪಿಗೆ ಅಡ್ರೆಸ್ ಇಲ್ಲದಂತೆ ಮಾಡೋದಕ್ಕಾಗಿಯೇ ಈಗ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಅವರಿಗೆ ಇಂದು ಕೊಪ್ಪಳದಲ್ಲಿ ಮಾತನಾಡಿ ಅವರು ಲೋಕಸಭೆಯಲ್ಲಿ ಅಡ್ರೆಸ್ಸೇ ಇರೋಲ್ಲ.ನಾವು ನುಡಿದಂತೆ ನಡೆದಿದ್ದೇವೆ.ನಿಗಿದಿತ ಯೋಜನೆಗಳನ್ನು ಆರಂಭ ಮಾಡುತ್ತೇವೆ.ಬಿಜೆಪಿಯವರು ಎಂದು ನುಡಿದಂತೆ ನಡೆದಿಲ್ಲ
ಹಿಂದಿನಿಂದಲೂ ಘೋಷಣೆಗಳನ್ನು ಜಾರಿಗೊಳಿಸಿಲ್ಲ
ಇದೇ ಕಾರಣಕ್ಕೆ ಅವರನ್ನು ಜನ ಮನೆಗೆ ಕಳುಹಿಸಿದ್ದಾರೆ ಎಂದರು.
ಈ ಹಿಂದೆ ಬಿಜೆಪಿ ಸರಕಾರ ಪ್ರತಿ 15 ಲಕ್ಷ ರೂಪಾಯಿ ನೀಡುವುದು. 2 ಕೋಟಿ ಉದ್ಯೋಗ ಸೃಷ್ಢಿ. ರೈತರ ಆದಾಯ ದ್ವಿಗುಣ ಎಲ್ಲಿ ಆಗಿದೆ
ಈ ಸಿಎಂ ನೇತ್ರತ್ವದಲ್ಲಿ ಒಂದೊಂದೇ ಯೋಜನೆಗಳಿಗೆ ಚಾಲನೆ ನೀಡುತ್ತೇವೆ ಎಂದು ಭರವಸೆ ನೀಡಿದರು.
ಹಿಂದಿನ ಸರಕಾರದಲ್ಲಿ ವಿದ್ಯುತ್ ದರ ಏರಿಕೆ ಮಾಡಲಾಗಿದೆ.ಈಗ ವಿದ್ಯುತ್ ಬಿಲ್ ಹೆಚ್ವು ಬಂದಿದೆ. ಸಮಸ್ಯೆಗಳ ಕುರಿತು ಸಿಎಂ ಹಾಗು ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ.ವಿದ್ಯುತ್ ಬಿಲ್ ಪಾವತಿಸಬೇಡಿ ಎನ್ನುವ ನಳಿನ ಕುಮಾರ ಕಟೀಲ
ರಾಜ್ಯ ಅಧ್ಯಕ್ಷರಾಗುವ ಯೋಗ್ಯತೆ ಇಲ್ಲ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಕಲುಷಿತ ನೀರು ಕುಡಿದ ಸಾವು ಪ್ರಕರಣಕ್ಕೆ ಪ್ರತಿಕ್ರಿಯಿಸಿ ಸಾವು ಸಂಭವಿಸಿದ ಕುಟುಂಬಗಳಿಗೆ ಸಿಎಂ ಜೊತಗೆ ಚರ್ಚಿಸಿ ಪರಿಹಾರ ಕೊಡಿಸಲಾಗುವುದು
ಅವೈಜ್ಞಾನಿಕ ಕಾಮಗಾರಿ ಮಾಡಲಾಗಿದೆ.ಇಲ್ಲಿ ಗುತ್ತಿಗೆದಾರ ಹಾಗು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಸಚಿವ ಶಿವರಾಜ ತಂಗಡಗಿ ಹೇಳಿದರು.