ಸುದ್ದಿಮೂಲ ವಾರ್ತೆ
ಮೈಸೂರು, ಜೂ.13:ಕೃಷ್ಣರಾಜಸಾಗರ ಜಲಾಶಯ (ಕೆಆರ್ಎಸ್) ಹಿನ್ನೀರಿನಲ್ಲಿ ಈಜಲು ಹೋದ ಮೈಸೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಹಾಸನ ಮೂಲದ ಚಿರಂತ್ (22) ಬೀದರ್ ಮೂಲದ ಸುನಿಲ್ (22) ಮೃತ ದುರ್ದೈವಿಗಳು. ಸ್ನೇಹಿತರ ಜೊತೆ ಬೈಕ್ನಲ್ಲಿ ಬಂದಿದ್ದು ಮೈಸೂರು ತಾಲ್ಲೂಕು ಮೀನಾಕ್ಷಿಪುರ ಗ್ರಾಮದ ಸಮೀಪ ಇರುವದ ಕೆಆರ್ಎಸ್ ಹಿನ್ನೀರು ಪ್ರದೇಶದ ನೀರಿನಲ್ಲಿ ಇಬ್ಬರೂ ಈಜಲು ನೀರಿಗೆ ಇಳಿದಿದ್ದರು. ಅರ್ಧಗಂಟೆ ಈಜಾಡಿದ ನಂತರ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.