ಸುದ್ದಿಮೂಲ ವಾರ್ತೆ ರಾಯಚೂರು, ಡಿ.03:
ಬಹುಕೋಟಿ ಹೂಡಿಕೆಯ ವಂಚನೆಯ ಆರೋಪ ಹೊತ್ತ ದರ್ವೇಶ್ ಕಂಪನಿಯ ಮೂಲ ಬಾಂಡ್ ಸಲ್ಲಿಸಿದ ಹೂಡಿಕೆದಾರರಿಗೆ ಹಣ ಮರಳಿಸುವ ಭರವಸೆ ಹೈಕೋರ್ಟ್ ಪೀಠ ಸ್ಪಷ್ಟಪಡಿಸಿದೆ.
ಹೂಡಿಕೆದಾರರಿಗೆ ಹಣ ಹಿಂದಿರುಗಿಸುವುದಕ್ಕೆೆ ಸಂಬಂಸಿದ ಹೈಕೋರ್ಟ್ನಲ್ಲಿ ನಡೆದ ವಿಚಾರಣೆಯಲ್ಲಿ, ದರ್ವೇಶ್ ಕಂಪನಿಯ ಪರ ನ್ಯಾಾಯವಾದಿ ತಾಹಿರ ಕೋರಿಕೆ ಅನ್ವಯ ಹೈಕೋರ್ಟ್ ನ್ಯಾಾಯಾೀಶರು ಈ ಬಗ್ಗೆೆ ಸ್ಪಷ್ಟಪಡಿಸಿದರು. ಹಣ ಹಿಂದಿರುಗಿಸುವ ಪ್ರಕ್ರಿಿಯೆಯಲ್ಲಿ ಮೂಲ ಬಾಂಡ್ ಆಧರಿಸಿ ಹಣ ಮರಳಿಸಬೇಕು, ನಕಲು ಪ್ರತಿಗಳನ್ನು ಪರಿಗಣಿಸದಂತೆ ನ್ಯಾಾಯಾಲಯಕ್ಕೆೆ ಮನವಿ ಮಾಡಲಾಗಿತ್ತು ಮನವಿ ಪುರಸ್ಕರಿಸಿ ನ್ಯಾಾಯಾಧೀಶರು ಸ್ಪಷ್ಟ ಭರವಸೆ ನೀಡಿದರು.
ದರ್ವೇಶ್ ಕಂಪನಿಯ ಷೇರು ಮೊತ್ತ ಬಿಡುಗಡೆಗೆ ಅಗತ್ಯ ತೆರಿಗೆ ಹಣ ಸಂಗ್ರಹಕ್ಕಾಾಗಿ ತನಿಖಾಧಿಕಾರಿ ಜಪ್ತಿಿಯಲ್ಲಿರುವ ಎರಡು ಎಕರೆ ಜಮೀನು ಮಾರಾಟಕ್ಕೆೆ ನ್ಯಾಾಯಾಲಯ ಸೂಚಿಸಿದೆ. ವ್ಯಕ್ತಿಿಯೊಬ್ಬ ಜಮೀನು ಖರೀದಿಗೆ ಮುಂದೆ ಬಂದಿದ್ದಾರೆ. ಜಮೀನು ಖರೀದಿಗೆ ಸಂಬಂಧಿಸಿ ಮುಂಗಡವಾಗಿ 50 ಲಕ್ಷ ರೂ ನ್ಯಾಾಯಾಲಯ ಸೂಚನೆಯಂತೆ ಎಸ್ಕ್ರೊೊ ಖಾತೆಯಲ್ಲಿ ಜಮಾ ಮಾಡಲು ಖರೀದಿದಾರ ಸಿದ್ದರಿರುವುದಾಗಿ ಜಮೀನು ಖರೀದಿದಾರ ನ್ಯಾಾಯಾಲಯಕ್ಕೆೆ ಹಾಜರಾಗಿ ವ್ಯಕ್ತಪಡಿಸಿದರು.
ಡಿಸೆಂಬರ್ 11ರ ವಿಚಾರಣೆ ವೇಳೆಗೆ 50 ಲಕ್ಷ ಮೊತ್ತವನ್ನು ಎಸ್ಕ್ರೋೋ ಖಾತೆಯಲ್ಲಿ ಜಮಾ ಮಾಡುವಂತೆ ನ್ಯಾಾಯಾಧೀಶರು ಸೂಚಿಸಿದರು. ಹಣ ಖಾತೆಗೆ ಮಾಡಿದರೆ ತನಿಖಾಧಿಕಾರಿ ಬಳಿ ಇರುವ ಜಮೀನು ಬಿಡುಗಡೆ ಮಾಡಿ ಮಾರಾಟ ಪ್ರಕ್ರಿಿಯೆಗೆ ಅವಕಾಶ ಮಾಡಿಕೊಡಲಾಗುತ್ತದೆ.
ತೆರಿಗೆ ಹಣ ಪಾವತಿ ಪ್ರಕ್ರಿಿಯೆ ನಂತರ ನೂರು ಕೋಟಿ ರೂ ಬಿಡುಗಡೆಗೊಳ್ಳುವ ಭರವಸೆ ನೀಡಲಾಗಿದೆ. ಈ ಹಣವನ್ನ ನ್ಯಾಾಯಾಲಯದಿಂದ ಸೂಚಿತ ಖಾತೆಯಲ್ಲಿ ಜಮಾ ಮಾಡುವ ಮೂಲಕ ಹೂಡಿಕೆದಾರರಿಗೆ ಅನುಪಾತದನ್ವಯ ಹಣ ಹಿಂತಿರುಗಿಸುವ ಪ್ರಕ್ರಿಿಯೆ ಆರಂಭಿಸಲಾಗುತ್ತದೆ. ಹೆಚ್ಚಿಿನ ಬಡ್ಡಿಿ ದರಕ್ಕೆೆ ದರ್ವೇಶ್ ಕಂಪನಿಯಲ್ಲಿ ಹೂಡಿಕೆ ಮಾಡಿ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಹೈಕೋರ್ಟ್ ನಿರ್ಧಾರ ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ ಎನ್ನಲಾಗಿದೆ.
3 ಕೋ 17 ಲ ತೆರಿಗೆ ಪಾವತಿ ನಂತರ ತನಿಖಾಧಿಕಾರಿಗಳ ಖಾತೆಯಲ್ಲಿ ಹಣ ಜಮಾಗೊಳ್ಳುವ ಬಗ್ಗೆೆ ಚರ್ಚೆ ಸಾಗಿದೆ. 62 ಎಕರೆ ಜಮೀನು ಕಂಪನಿ ಹೆಸರಲ್ಲಿ ಇರುವ ದಾಖಲೆಗಳಿವೆ. ಸುಮಾರು 14 ಕೋಟಿ ಹಣವೂ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದೆಲ್ಲವೂ ನ್ಯಾಾಯಾಲಯದ ವಿಚಾರಣೆ ಹಂತದಲ್ಲಿರುವುದರಿಂದ ಡಿ.11ರ ವಿಚಾರಣೆ ಕುತೂಹಲಕ್ಕೆೆ ತೆರೆ ಬೀಳಲಿದೆ.

