ಸುದ್ದಿಮೂಲ ವಾರ್ತೆ ಬೆಂಗಳೂರು , ನ.06:
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಮುಂದುವರಿದಿದ್ದು, ಶನಿವಾರ ದೇಶದಾದ್ಯಂತ 500 ಕ್ಕೂ ಹೆಚ್ಚು ಇಂಡಿಗೋ ವಿಮಾನಗಳು ರದ್ದಾಗಿದ್ದರೆ, ಬೆಂಗಳೂರಿನಲ್ಲಿ 124 ವಿಮಾನಗಳು ರದ್ದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.
ದೇಶದ ಅತೀ ದೊಡ್ಡ ವಿಮಾನಯಾನ ಸಂಸ್ಥೆೆ ಇಂಡಿಗೋ ಸಂಸ್ಥೆೆಯು ತಾಂತ್ರಿಿಕ ಸಮಸ್ಯೆೆ ಮತ್ತು ಮತ್ತು ಸಿಬ್ಬಂದಿ ಕೊರತೆ ಕಾರಣದಿಂದಾಗಿ ಕಳೆದ ಸೋಮವಾರದಿಂದಲೂ ಸಮಸ್ಯೆೆ ಎದುರಿಸುತ್ತಿಿದೆ. ದೇಶೀಯ ವಿಮಾನಯಾನದಲ್ಲಿ ಶೇ.60ಕ್ಕಿಿಂತ ಹೆಚ್ಚಿಿನ ಪಾಲು ಹೊಂದಿ ಪ್ರಯಾಣಿಕರಿಂದಲೂ ಮೆಚ್ಚುಗೆ ಗಳಿಸಿದ್ದ ಇಂಡಿಗೋ ಈಗ ತೀವ್ರ ಬಿಕ್ಕಟ್ಟು ಎದುರಿಸುತ್ತಿಿದೆ.
ದೇಶಾದ್ಯಂತ ಇಂಡಿಗೋ ವಿಮಾನಗಳ ಹಾರಾಟದಲ್ಲಿ ತೊಂದರೆಯಾಗುತ್ತಿಿದೆ. ವಿಮಾನಗಳು ರದ್ದಾಗಿದ್ದರೆ, ಇನ್ನೂ ಕೆಲವು ಹಾರಾಟ ನಡೆಸಲು ಮುಂದಾದ ವಿಮಾನಗಳು ತೀವ್ರ ವಿಳಂಬ ಮಾಡುತ್ತಿಿವೆ. ಅಲ್ಲದೆ, ಅಂತಹ ವಿಮಾನಗಳಿಂದ ಪ್ರಯಾಣಿಕರು ಇಳಿದ ಮೇಲೆ ಅವರ ಲಗೇಜ್ಗಳನ್ನು ನೀಡಲು ದಿನಗಟ್ಟಲೆ ಕಾಯಿಸಲಾಗುತ್ತಿಿದೆ. ಇದು ಪ್ರಯಾಣಿಕರನ್ನು ತೀವ್ರ ಆಕ್ರೋೋಶಕ್ಕೆೆ ಗುರಿಮಾಡಿದೆ.
ವಿವರಣೆ ಕೇಳಿದ ಪ್ರಧಾನಿ ಕಚೇರಿ:
ಇಂಡಿಗೋ ವಿಮಾನಯಾನ ಸಂಸ್ಥೆೆಗಳಲ್ಲಿ ಹೆಚ್ಚುತ್ತಿಿರುವ ಬಿಕ್ಕಟ್ಟಿಿನ ಹಿನ್ನೆೆಲೆಯಲ್ಲಿ ಪ್ರಧಾನಿ ಕಚೇರಿಯಿಂದ ವಿವರಣೆ ಕೇಳಲಾಗಿದೆ. ಈ ಮಧ್ಯೆೆ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆಗಳು ನಿರಂತರವಾಗಿ ನಡೆಯುತ್ತಿಿದ್ದರೂ ಸದ್ಯಕ್ಕೆೆ ಸಮಸ್ಯೆೆ ಪರಿಹಾರವಾಗುತ್ತಿಿಲ್ಲ.
ಈ ಮಧ್ಯೆೆ ಇಂಡಿಗೋ ವಿಮಾನ ಸಂಸ್ಥೆೆಯ ಸಿಇಓ ಪೀಟರ್ಎಲ್ಬರ್ಸ್ ಅವರು, ‘ಇಂಡಿಗೋ ವಿಮಾನಗಳು ಸಾಮಾನ್ಯವಾಗಿ ಕಾರ್ಯಾಚಾರಣೆಯನ್ನು ಪುನರಾರಂಭಿಸಲು 10 ದಿನಗಳ ಸಮಯ ಬೇಕು’ ಎಂದು ಕೋರಿದ್ದಾರೆ ಎಂದು ವರದಿಯಾಗಿದೆ.
ಟಿಕೆಟ್ ದರ ನಿಯಂತ್ರಿಿಸಿ ಆದೇಶ:
ಇಂಡಿಗೋ ವಿಮಾನಗಳ ಸಮಸ್ಯೆೆಯಿಂದಾಗಿ ಪ್ರಯಾಣಿಕರು ಇತರೆ ವಿಮಾನಗಳ ಮೊರೆ ಹೋಗುತ್ತಿಿದ್ದು, ಇದರಿಂದ ಏರ್ಲೈನ್ಗಳು ಟಿಕೆಟ್ ದರ ಮನಬಂದಂತೆ ಹೆಚ್ಚಿಿಸಿವೆ. ಇದರ ನಿಯಂತ್ರಣಕ್ಕಾಾಗಿ ಕೇಂದ್ರ ಸರ್ಕಾರ ಶನಿವಾರ ಮಧ್ಯಪ್ರವೇಶಿಸಿದ್ದು, 18 ಸಾವಿರ ರೂ. ಗರಿಷ್ಠ ದರವನ್ನು ನಿಗದಿಪಡಿಸಿದೆ.
ಬೆಂಗಳೂರಿನಿಂದ ಮುಂಬೈಗೆ 39 ಸಾವಿರದಿಂದ 74 ಸಾವಿರದವರೆಗೆ, ಬೆಂಗಳೂರಿನಿಂದ ಕೊಚ್ಚಿಿಗೆ 18 ಸಾವಿರದವರೆಗೆ, ಹೈದರಾಬಾದ್ಗೆ 12 ಸಾವಿರದಿಂದ 13 ಸಾವಿರವರೆಗೆ, ಗೋವಾಗೆ 16 ಸಾವಿರದಿಂದ 24 ಸಾವಿರ ರೂವರೆಗೆ, ಪುಣೆಗೆ 24 ಸಾವಿರದಿಂದ 34 ಸಾವಿರ ರೂವರೆಗೆ ಮತ್ತು ಚೆನ್ನೈಗೆ 25ರೂ.ವರೆಗೆ ದರ ಹೆಚ್ಚಳ ಮಾಡಲಾಗಿದೆ.
ಇದರ ನಿಯಂತ್ರನಣಕ್ಕಾಾಗಿ ಕೇಂದ್ರ ಸರ್ಕಾರವು ದರ ನಿಯಂತ್ರಣ ಮಾಡಿ ಆದೇಶ ಹೊರಡಿಸಿದೆ. 500 ಕಿಲೋ ಮೀಟರ್ವರೆಗಿನ ಪ್ರಯಾಣದ ಅಂತರದ ದರ 7 ಸಾವಿರದ 500 ರೂ. ಮೀರುವಂತಿಲ್ಲ. ಅಲ್ಲದೇ, 500ರಿಂದ 1000 ಕಿಲೋ ಮೀಟರ್ಗೆ 12 ಸಾವಿರ ರೂ. ಹಾಗೂ 1,000 ದಿಂದ 1 ಸಾವಿರದ ಐನೂರು ಕಿಲೋ ಮೀಟರ್ವರೆಗೆ 15,000. 1500 ಕಿ.ಮೀ. ಮೇಲ್ಪಟ್ಟು ಪ್ರಯಾಣಿಸುವ ದೂರಕ್ಕೆೆ 18 ಸಾವಿರದವರೆಗೆ ಮಾತ್ರ ದರ ನಿಗದಿ ಮಡಬೇಕು ಎಂದು ಸೂಚಿಸಲಾಗಿದೆ.
————-
ಇಂಡಿಗೋ ಸಮಸ್ಯೆೆ: ಡಿ.10ರವರೆಗೆ ವಿಶೇಷ ರೈಲುಗಳು
ದೇಶಾದ್ಯಂತ ಇಂಡಿಗೋ ವಿಮಾನಗಳ ರದ್ದತಿಯಿಂದಾಗಿ ಸಂಕಷ್ಟಕ್ಕೆೆ ಸಿಲುಕಿರುವ ಪ್ರಯಾಣಿಕರ ಅನುಕೂಲಕ್ಕಾಾಗಿ ನೈಋತ್ಯ ರೈಲ್ವೆೆ ಶನಿವಾರ ಕೇಂದ್ರ, ಆಗ್ನೇಯ ಮತ್ತು ದಕ್ಷಿಣ ರೈಲ್ವೆೆಗಳ ಸಹಯೋಗದೊಂದಿಗೆ ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಿದೆ.
ಬೆಂಗಳೂರು- ಚೆನ್ನೈ, ಬೆಂಗಳೂರು- ಪುಣೆ, ಯಶವಂತಪುರ-ಹಜರತ್ ನಿಜಾಮುದ್ದೀನ್, ಶಾಲಿಮಾರ್-ಯಲಹಂಕ ಮತ್ತು ಎರ್ನಾಕುಲಂ- ಯಲಹಂಕ ಸೇರಿದಂತೆ ಹೆಚ್ಚಿಿನ ಬೇಡಿಕೆಯಲ್ಲಿರುವ ಮಾರ್ಗಗಳಲ್ಲಿ ಡಿಸೆಂಬರ್ 6 ಮತ್ತು 10 ರ ನಡುವೆ ವಿಶೇಷ ರೈಲುಗಳು ಕಾರ್ಯನಿರ್ವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕೃತ ಹೇಳಿಕೆಯ ಪ್ರಕಾರ, ಚೆನ್ನೈ ಎಗ್ಮೋೋರ್ ಮತ್ತು ಕೆಎಸ್ಆರ್ಬೆಂಗಳೂರು ನಡುವೆ ರೈಲು ಸಂಖ್ಯೆೆ 06257/06258, ಬೆಂಗಳೂರು ಮತ್ತು ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ 06259/06260 ರೈಲು ಮತ್ತು ಬೆಂಗಳೂರು ಮತ್ತು ಪುಣೆ ನಡುವೆ 06263/06264 ರೈಲುಗಳನ್ನು ನೈರುತ್ಯ ರೈಲ್ವೆೆ ಓಡಿಸಲಿದೆ.
ಕೇಂದ್ರ ರೈಲ್ವೆೆ ಪುಣೆ ಮತ್ತು ಬೆಂಗಳೂರು ನಡುವೆ ರೈಲು ಸಂಖ್ಯೆೆ 01413/01414 ಓಡಿಸಲಿದ್ದು, ಆಗ್ನೇಯ ರೈಲ್ವೆೆ ಶಾಲಿಮಾರ್ ಮತ್ತು ಯಲಹಂಕ ನಡುವೆ ರೈಲು ಸಂಖ್ಯೆೆ 08073/08074 ಮತ್ತು ದಕ್ಷಿಣ ರೈಲ್ವೆೆ ಎರ್ನಾಕುಲಂ ಮತ್ತು ಯಲಹಂಕ ನಡುವೆ ರೈಲು ಸಂಖ್ಯೆೆ 06147/06148 ಅನ್ನು ಓಡಿಸಲಿದೆ ಎಂದು ಹೇಳಿಕೆ ತಿಳಿಸಿದೆ.
ಪ್ರಯಾಣಿಕರು ರೈಲುಗಳ ಹೊಸ ವೇಳಾಪಟ್ಟಿಿಯನ್ನು ಪರಿಶೀಲಿಸಲು ಹಾಗೂ ನಿಲ್ದಾಾಣಗಳಿಗೆ ಮುಂಚಿತವಾಗಿ ಬರಲು ನೈರುತ್ಯ ರೈಲ್ವೆೆ ಸೂಚಿಸಿದೆ.

