ಸುದ್ದಿಮೂಲ ವಾರ್ತೆ ರಾಯಚೂರು , ಡಿ.07:
ಕರ್ನಾಟಕ ಇನ್ಸ್ಟಿಿಟ್ಯೂಟ್ ಆ್ ಕೋ-ಅಪರೇಟಿವ್ ಮ್ಯಾಾನೇಜ್ಮೆಂಟ್ ತರಬೇತಿ ಸಂಸ್ಥೆೆಯ 6 ತಿಂಗಳ ಡಿಪ್ಲೋೋಮಾ ಇನ್ ಕೋ-ಅಪರೇಟಿವ್ ಮ್ಯಾಾನೇಜ್ಮೆಂಟ್ ತರಬೇತಿಗೆ ಅರ್ಜಿ ಆಹ್ವಾಾನಿಸಲಾಗಿದೆ.
ಈ ತರಬೇತಿಯನ್ನು ಪಡೆಯಲಿಚ್ಚಿಿಸುವ ಅರ್ಹ ಅಭ್ಯರ್ಥಿಗಳು ಸಹಕಾರ ಸಂಘ, ಸಂಸ್ಥೆೆ, ಸಹಕಾರ ಇಲಾಖೆ, ಸಹಕಾರ ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ವೇತನ ಪಡೆಯುವ ನೌಕರನಾಗಿರುವ ಅಭ್ಯರ್ಥಿ ದೂರ ಶಿಕ್ಷಣ ಮೂಲಕ ಹಾಗೂ ಖಾಸಗಿ ಅಭ್ಯರ್ಥಿಗಳು ಕನಿಷ್ಟ 10ನೇ ತರಗತಿ ಪಾಸಾದ ನಿರುದ್ಯೋೋಗಿಗಳು ನಿರಂತರ ಶಿಕ್ಷಣ ಮೂಲಕ ತರಬೇತಿ ಪಡೆಯಲು ಅವಕಾಶ ಕಲ್ಪಿಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶೇ. 18ರಷ್ಟು ಸ್ಥಾಾನ ಎಸ್ಸಿ,ಎಸ್ಟಿಗೆ ತರಬೇತಿಗಾಗಿ ಮೀಸಲಿದೆ. ತರಬೇತಿ ಅವಧಿಯಲ್ಲಿ ಎಲ್ಲಾಾ ಅಭ್ಯರ್ಥಿಗಳಿಗೆ ಶಿಷ್ಯ ವೇತನ ಸೌಲಭ್ಯವೂ ಇದೆ. ಕಲ್ಯಾಾಣ ಕರ್ನಾಟಕ ಭಾಗದ ಆರು ಜಿಲ್ಲೆೆಗಳ ಅಭ್ಯರ್ಥಿಗಳು ಡಿ.31ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿಿನ ಮಾಹಿತಿಗಾಗಿ 9916726886, 08572-248340/7406899249/8431868966/ 9620330363/ 9480782654 ಗೆ ಸಂಪರ್ಕಿಸಲು ಜಿಲ್ಲಾಾ ಸಹಕಾರ ಒಕ್ಕೂಟ ದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾಾರೆ.

